ಕೃಷ್ಣರಾಜಪೇಟೆ ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ದಿನಾಂಕ 8,9/02/2024 ರಂದು ನಡೆಯಲಿರುವ ಜಾತ್ರೆ ಕಾರ್ಯಕ್ರಮಕ್ಕೆ ಆಹ್ವಾನವನ್ನು ನೀಡಿ ಪೋಸ್ಟರ್ ಬಿಡುಗಡೆ ಮಾಡಿದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನ ನಂದ ಪುರಿ ಸ್ವಾಮೀಜಿ.

ಕೃಷ್ಣರಾಜಪೇಟೆ ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ದಿನಾಂಕ 8,9/02/2024 ರಂದು ನಡೆಯಲಿರುವ ಜಾತ್ರೆ ಕಾರ್ಯಕ್ರಮಕ್ಕೆ ಆಹ್ವಾನವನ್ನು ನೀಡಿ ಪೋಸ್ಟರ್ ಬಿಡುಗಡೆ ಮಾಡಿದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನ ನಂದ ಪುರಿ ಸ್ವಾಮೀಜಿ.

ಜಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ರವರು ಸಮಾಜದ ಬಂಧುಗಳೆಲ್ಲರೂ ಒಮ್ಮತವಾಗಿ ಸಂಘಟಿತರಾಗಿರಬೇಕು ಅನನ್ಯತೆಯನ್ನು ಸಾಮರಸ್ಯವನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ಪಕ್ಷಭೇದವನ್ನು ಮರೆತು ಕೆಲಸ ಮಾಡಬೇಕು ವರ್ಷಕ್ಕೊಮ್ಮೆ ಬರುವ ಕುಲದ ಹಬ್ಬ ಮಹಾನ್ ಋಷಿ ವಾಲ್ಮೀಕಿ ಜಾತ್ರೆಗೆ ಆಗಮಿಸಿ ಕುಲದ ಮಹಾನ್ ಪುರುಷರಾದ ವಾಲ್ಮೀಕಿ ಭಗವಂತ ರಿಗೆ ಗುರುಗಳಾದ ಶ್ರೀ ಶ್ರೀ ಶ್ರೀ ಪರಮಪೂಜ್ಯ

ಪುಣ್ಯಾನಂದಪುರಿ ಸ್ವಾಮೀಜಿ ರವರಿಗೆ ನಮಿಸಿ ಆಶೀರ್ವಾದ ಪಡೆದುಕೊಳ್ಳಬೇಕು ಹಾಗೂ ಸಮಾಜದ ಎಲ್ಲ ಬಂಧುಗಳು ಒಂದು ಕಡೆ ಸೇರಿ ನಮ್ಮ ಸಮಾಜದ ಶಕ್ತಿ ಪ್ರದರ್ಶನವನ್ನು ಮಾಡಬೇಕು ಇದರಿಂದ ನಮ್ಮ ಮೇಲೆ ದಬ್ಬಾಳಿಕೆ ದೌರ್ಜನ್ಯ ಮತ್ತು ತಸ್ಸಾರವಾಗಿ ನಡೆದುಕೊಳ್ಳುವವರಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ನೀಡುವಂತಹ ಅವಕಾಶ ನಮಗೆ ಜಾತ್ರೆಯ ಮುಖಾಂತರ ಸಂದೇಶ ಕೊಡುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ನಂತರ ಕೃಷ್ಣರಾಜಪೇಟೆ ತಾಲೂಕ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ ಆರ್ ರಾಜನಾಯಕರವರ ಮನೆಯ ನೂತನ ಗೃಹಪ್ರವೇಶದ್ದ ಮನೆಗೆ ಭೇಟಿ ನೀಡಿದ ಪ್ರಸನ್ನ ನಂದ ಮಹಾಪುರಿ ಸ್ವಾಮೀಜಿ ರವರಿಗೆ ಪಾದಪೂಜೆ ಮಾಡಿ ಸನ್ಮಾನ ಗೌರವ ಸಮರ್ಪಣೆಯನ್ನು ಮಾಡಿ ಕುಟುಂಬ ಸಮೇತ ಗುರುವಿನ ಆಶೀರ್ವಾದ ಪಡೆದರು,

 ನಂತರ ಅಕ್ಕಿಹೆಬ್ಬಾಳು ನಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಸಮುದಾಯ ಭವನ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅಬಕಾರಿ ಪೂರ್ಣಗೊಳಿಸಿ ಶುಭವಾಗಲಿ ಎಂದು ಶುಭ ಹಾರೈಸಿದರು,

ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹರೀಶ್,ಪೂನಹಳ್ಳಿ ರೇವಣ್ಣ, ಎ ಆರ್ ರಾಜನಾಯಕ, ರಾಜು ಜಿಪಿ,ನರಸ ನಾಯಕ, ಮಹೇಶ್ ನಾಯಕ,ಆರ್ ಜಗದೀಶ್,ಅಲಂಬಾಡಿ ಕಾವಲು ನಾಗಣ್ಣ, ಪ್ರಭಾಕರ್, ಬೈರ, ನರೇಂದ್ರ ನಾಯಕ, ,ಸ್ವಾಮಿ ನಾಯಕ, ಶಶಿಕುಮಾರ್, ಮಂಜು ನಾಯಕ, ಲೋಕೇಶ್, ಜಯರಾಮ ನಾಯಕ, ಮಂಜುನಾಥ, ಶಿವರಾಮನಾಯಕ,ರಮೇಶ್, ಸಮಾಜದ ಯಜಮಾನರು ಮುಖಂಡರು ಮಂಡ್ಯ ಜಿಲ್ಲೆಯ ಸಮಾಜದ ಮುಖಂಡರು ಜನಪ್ರತಿನಿಧಿಗಳು ಯುವಕರು ಮಹಿಳೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 *ವರದಿ, ರಾಜು ಜಿಪಿ ಕಿಕ್ಕೇರಿ ಕೆಆರ್ ಪೇಟೆ*

What's Your Reaction?

like

dislike

love

funny

angry

sad

wow