*ನಾನೂ ಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿ, ಶಿಕ್ಷಕರು ಮಕ್ಕಳ ಉತ್ತಮ ಭವಿಷ್ಯಕ್ಕೆ ಬುನಾದಿ ಹಾಕಬೇಕು-ಶಾಸಕ ಡಾ"ಎನ್.ಟಿ.ಶ್ರೀನಿವಾಸ್*-
-ವಿಜಯನಗರ ಜಿಲ್ಲೆ ಕೂಡ್ಲಿಗಿ: ನಾನೂ ನಮ್ಮೂರಾದ ನರಸಿಂಹಗಿರಿ (ಹಳ್ಳಿಯ) ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದೆ, ಸರ್ಕಾರಿ ಶಾಲೆಯನ್ನು ಯಾರೂ ಯಾವುದೇ ಕಾರಣಕ್ಕೆ ಜರಿಯ ಬಾರದು ಎಂದು. ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ"ಎನ್.ಟಿ.ಶ್ರೀನಿವಾಸ್ ರವರು, ತಮ್ಮ ಬಾಲ್ಯದ ಸವಿ ಸವಿ ನೆನಪುಗಳ ಬುತ್ತಿ ಬಿಚ್ಚಿಟ್ಟರು. ಅವರು ನ26ರಂದು, ಪಟ್ಟಣದ ಪ್ರವಾಸಿ ಮಂದಿರದಲ್ಲಿ. ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿಗಳ ಸಮನ್ವಯ ವೇದಿಕೆ ಆಯೋಜಿಸಿದ್ದ, ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಶಿಕ್ಷಕರು ದೇಶಕ್ಕೆ ಭವಿಷ್ಯದ ಸತ್ಪ್ರಜೆಗಳನ್ನು ನೀಡೋ ಹೊಣೆ ಹೊಂದಿದ್ದಾರೆ. ಆದ್ಧರಿಂದ ಅವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಶಿಸ್ಥು ಸಂಸ್ಕಾರಗಳನ್ನು ನೀಡಿ, ಅವರ ಉತ್ತಮ ಭವಿಷ್ಯಕ್ಕಾಗಿ ಭದ್ರ ಬುನಾದಿ ಹಾಕುಬೇಕಿದೆ ಎಂದರು. ಅವರು ಇದಕ್ಕೂ ಮೊದಲು (ನ26) ಭಾರತದ ಸಂವಿಧಾನದ ದಿನದ ಪ್ರಯುಕ್ತ, ವೇದಿಕೆಯ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ. ಸಂವಿಧಾನ ಶಿಲ್ಪಿ ಡಾ॥ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ನಮಿಸಿದರು. ಮತ್ತು ಭಾರತಕ್ಕೆ ಅಂಬೇಡ್ಕರ್
ರವರ ಕೊಡುಗೆ, ಹಾಗೂ ಸಂವಿಧಾನ ಕುರಿತು ಮಾತನಾಡಿದರು. ಭಾರತೀಯ ನಾಗರಿಕರಿಗೆ ಹಕ್ಕುಗಳನ್ನು, ಹಾಗೂ ಕಾನೂನುಗಳನ್ನು ವಿವರಿಸುವ ದಾಖಲೆ ತೋರಿಸುವಲ್ಲಿ. ಬಾಬಾ ಸಾಹೇಬರವರು ಬಹುದೊಡ್ಡ ಪಾತ್ರವನ್ನು ವಹಿಸಿದ್ದಾರೆ, ಅವರ ಶ್ರಮದಾನದ ಫಲ ಸಂವಿಧಾನವಾಗಿದೆ. ಅಂತಹ ಅಮೂಲ್ಯವಾದ ಕೊಡುಗೆಯನ್ನು ದೇಶಕ್ಕೆ ನೀಡಿರುವ ದಿನವಾಗಿದ್ದು, ಇಂದು ಬಾಬಾ ಸಾಹೇಬರ
ಕೊಡುಗೆಯನ್ನು ದೇಶ ಸ್ಮರಿಸುತ್ತಿದೆ ಎಂದರು. ನಾಡಿಗೆ ಸತ್ಪ್ರಜೆಗಳನ್ನು ನೀಡೋ ಬಹು ದೊಡ್ಡ ಜವಾಬ್ದಾರಿ, ಪೋಷಕರ ಶಿಕ್ಷಕರ SDMC ಯವರ ಮತ್ತು ನಮ್ಮೆಲ್ಲರ ಮೇಲಿದೆ ಎಂದರು. ವೇದಿಕೆಯಲ್ಲಿ SDMC ಸಮನ್ವಯ ಸಮಿತಿ ರಾಜ್ಯಾದ್ಯಕ್ಷರಾದ ಉಮೇಶ್ ಜಿ ಗಂಗವಾಡಿ, SDMC ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ. ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ. SDMC
ಸಮನ್ವಯ ಸಮಿತಿಯ ರಾಜ್ಯ ಜಿಲ್ಲಾ ತಾಲೂಕು ಘಟಕಗಳ ಮುಖಂಡರು, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ರಾಜ್ಯ ಕಾರ್ಯದರ್ಶಿ ಜಿ.ಎಸ್.ಪಾರ್ವತಿ, ರಾಜ್ಯ ಖಜಾಂಚಿ ಜ್ಯೋತಿ ರಾಮಶೆಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ವೆಂಕಟೇಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಿ.ಕೊಟ್ರಗೌಡ, SDMC ಸಮನ್ವಯ ಸಮಿತಿ ಕೂಡ್ಲಿಗಿ ತಾಲೂಕಾಧ್ಯಕ್ಷರಾದ ಟಿ.ಭಾಗ್ಯ, ಹೂವಿನಹಡಗಲಿ ಸಮಿತಿಯ ಅಧ್ಯಕ್ಷರಾದ ಎಸ್.ಯಶೋಧ,
ಬಿಇಒ ಪದ್ಮನಾಭ ಕರಣಂ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಣ ಇಲಾಖಾಧಿಕಾರಿಗಳು, ತಾಲೂಕಿನ ವಿವಿದೆಡೆಯ ಶಿಕ್ಷಕರು. SDMC ಸಮನ್ವಯ ಸಮಿತಿಯ ಕೂಡ್ಲಿಗಿ ತಾಲೂಕು, ಹಾಗೂ ನೆರೆ ಹೊರೆ ತಾಲೂಕು ಸಮತಿಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*
What's Your Reaction?