ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಅರ್ಪಣಾ ಮನೋಭಾವನೆಯಿಂದ ದುಡಿಯುವ ಮೂಲಕ ಭಾರೀ ಬಹು ಮತಗಳ ಅಂತರದ ಗೆಲುವು ತಂದುಕೊಡೋಣ ಎಂದು ಮಾಜಿ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಅರ್ಪಣಾ ಮನೋಭಾವನೆಯಿಂದ ದುಡಿಯುವ ಮೂಲಕ ಭಾರೀ ಬಹು ಮತಗಳ ಅಂತರದ ಗೆಲುವು ತಂದುಕೊಡೋಣ ಎಂದು ಮಾಜಿ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದರು.

ಅವರು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೂತ್ ಮಟ್ಟದ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಕಾರ್ಯಕರ್ತರು ಪಕ್ಷದ ನಿಷ್ಠಾವಂತ ಕಾರ್ಯಕರ್ತ ರಾಗಿರುವುದರಿಂದ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕತೆಯಿಂದ ದುಡಿಯುವ ಮನಸ್ಸು ಹೊಂದಿದ್ದಾರೆ. ದೇಶದಲ್ಲಿ ಎನ್. ಡಿ.ಎ ನೇತೃತ್ವ ವಹಿಸಿರುವ ನರೇಂದ್ರ ಮೋದಿಜಿ ಅವರ ಕೈಬಲಪಡಿಸಲು ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳು ಗೆಲ್ಲಲೇ ಬೇಕಾಗಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಕುಮಾರಣ್ಣ ಅವರಿಗೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 50ಸಾವಿರ ಹೆಚ್ಚುವರಿ ಮತಗಳನ್ನು ಕೊಡಿಸಲು ಬಿಜೆಪಿ ಕಾರ್ಯಕರ್ತರು ಹಣಕಾಸು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಾದರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಭರ್ಜರಿ ಗೆಲುವು ತಂದುಕೊಡಬೇಕು ಎಂದು ನಾರಾಯಣಗೌಡ ಕೈಮುಗಿದು ಮನವಿ ಮಾಡಿದರು.

ಕೃಷ್ಣರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ತಾಲೂಕು ಉಸ್ತುವಾರಿ ರಾಶಿ ಸಿದ್ದರಾಜುಗೌಡ, ಕೃಷ್ಣಪ್ಪ, ಶ್ರೀರಂಗಪಟ್ಟಣ ಉಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಹಾಗೂ ಸಿಂಗನಹಳ್ಳಿ ರವಿ,ಪುರಸಭೆ ಸದಸ್ಯ ಬಸ್ ಸಂತೋಷ್ ಕುಮಾರ್, ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರು ಮಹೇಶನಾಯಕ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು, ಎಸ್ ಟಿ ಮೋರ್ಚಾದ ತಾಲೂಕ ಅಧ್ಯಕ್ಷರಾದ ರಾಜು ಜಿ ಪಿ, ಓಬಿಸಿ ತಾಲೂಕು ಮೋರ್ಚಾದ ಅಧ್ಯಕ್ಷರಾದ ಹಾದನೂರು ಮಂಜು, ಎಸ್ಸಿ ಮೂರ್ಛೆದ ತಾಲೂಕು ಅಧ್ಯಕ್ಷರಾದ ಯಾಲಕಪ್ಪ,ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ನಗರ ಮಹಿಳಾ ಅಧ್ಯಕ್ಷೆ ಚಂದ್ರಕಲಾ ರಮೇಶ್, ಪುಷ್ಪರಮೇಶ್, ಲತಾ ಮತ್ತಿಘಟ್ಟ, ಬಿಲ್ಲೇನಹಳ್ಳಿ ಕುಮಾರ್, ರವಿಕುಮಾರ್, ಜೇಟುಸಿಂಗ್ ರಾಜ್ ಪುರೋಹಿತ್, ಮಾಧ್ಯಮ ಪ್ರಮುಖ ಮಧುಸೂದನ್, ಕೆ ಆರ್ ಪೇಟೆ ರಾಮಕೃಷ್ಣ, ಪುರ ದೇವರಾಜ್,ಶ್ರೀನಿವಾಸ್ ಮೂರ್ತಿ, ಮುರುಕನಹಳ್ಳಿ ಸುನಿಲ್ ಕುಮಾರ್, ಎಸ್ ಟಿ ಮೋರ್ಚಾ ಸಂತೆ ಬಾಚಳ್ಳಿ ಹೋಬಳಿ ಅಧ್ಯಕ್ಷರು ಸತೀಶ್,ಸೇರಿದಂತೆ ನೂರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.

 *ವರದಿ.ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow