*ಕರ್ನಾಟಕ ರಾಜ್ಯ ಪ್ರಾಂತ್ಯ ಕೂಲಿ ಕಾರ್ಮಿಕ ಸಂಘ ನೂತನವಾಗಿ ಗ್ರಾಮ ಘಟಕವನ್ನು ಉದ್ಘಾಟಿಸಿ ಶುಭ ಹಾರೈಸಿದ ರಾಜ್ಯಾಧ್ಯಕ್ಷರಾದ ಪುಟ್ಟ ಮಾದು ರವರು*
ಕೆ ಆರ್ ಪೇಟೆ ಕಿಕ್ಕೇರಿg ಹೋಬಳಿ ಉದ್ದಿನ ಮಲ್ಲನ ಹೊಸೂರು ನಲ್ಲಿ ಕೂಲಿ ಕಾರ್ಮಿಕ ಸಂಘದ ಗ್ರಾಮ ಘಟಕವನ್ನು ಕೂಲಿ ಕಾರ್ಮಿಕರ ಮುಖಂಡತ್ವ ಹಾಗೂ ರಾಜ್ಯ ಅಧ್ಯಕ್ಷರಾದ ಪುಟ್ಟ ಮಾತುರವರು ಲಕ್ಷ್ಮಿಪುರ ಗ್ರಾಮ ಪಂಚಾಯಿತಿಯ ಉದ್ದಿನ ಮಲ್ಲನ ಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಘಟಕವನ್ನು ಉದ್ಘಾಟನೆ ಮಾಡಿ ಗ್ರಾಮವನ್ನು ವೀಕ್ಷಣೆ ಮಾಡಲಾಯಿತು. ಆ ಊರಿನ ಕುಟುಂಬಗಳು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದು ಗ್ರಾಮವು ಕೂಡ ಇನ್ನುವೆ ರಸ್ತೆ ಇಲ್ಲದೆ ಕುಡಿಯಲು ನೀರು ಇಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕೂಲ್ ಇಲ್ಲದೆ ನೆನೇ ಗುದ್ದಿಗೆ ಬಿದ್ದಿದೆ ಆ ಕಾರಣ ಇ ಓ ರವರಿಗೆ ಮಾತನಾಡಿ ಆ ಗ್ರಾಮಕ್ಕೆ ಉದ್ಯೋಗ ಖಾತ್ರಿ ಕೆಲಸ ಕೂಲಿಕಾರರಿಗೆ ಕೊಟ್ಟು ಗ್ರಾಮ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಶೀಘ್ರವಾಗಿ ಇಲ್ಲಿಯ ಸಮಸ್ಯೆಯನ್ನು ಪರಿಹರಿಸುವಂತೆ ವಿನಂತಿ ಮಾಡಿದ ಪುಟ್ಟ ಮಾದುರವರು.
ಕೂಲಿ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಹನುಮೇಶ್ ಮಾತನಾಡಿ ಕೂಲಿ ಕಾರ್ಮಿಕರಿಗೆ 365 ದಿನಗಳು ಕೂಲಿ ಸಿಗುವಂತೆ ಸರ್ಕಾರಕ್ಕೆ ಒತ್ತಡ ತರುತ್ತಿದ್ದೇವೆ ಈಗಾಗಲೇ 150 ದಿನಗಳು ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡುವುದಾಗಿ ಸರ್ಕಾರ ಭರವಸೆಯನ್ನು ನೀಡಿ ಆದೇಶ ಹೊರಡಿಸಿದೆ ಅದರಂತೆ ತಾವುಗಳೆಲ್ಲರೂ ನಿಮ್ಮ ನಿಮ್ಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಕೆಲಸ ಪಡೆದು ಉದ್ಯೋಗ ಮಾಡುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು ಕೂಲಿ ಕಾರ್ಮಿಕರಿಗೆ ದಿನನಿತ್ಯ ಬಳಸುವ ಮೂಲಭೂತ ಸೌಲತ್ತುಗಳು ದೊರಕಬೇಕು ಈ ಸಂಘ ಉದ್ಘಾಟಿಸಿದ ಪೂರ್ಣ ಪ್ರಮಾಣದಲ್ಲಿ ಇಷ್ಟಾರ್ಥ ನೆರವೇರುವಂತೆ ಎಲ್ಲರೂ ಒಗ್ಗಟ್ಟಿನಿಂದ ಸಂಘಟಿತರಾಗಿ ಕರ್ತವ್ಯ ನಿರ್ವಹಿಸಿದಾಗ ಸಂಘಟನೆಗೆ ಶಕ್ತಿ ಬರುತ್ತದೆ ಎಂದು ತಿಳಿಸಿ ನೂತನವಾಗಿ ಗ್ರಾಮ ಘಟಕದ ಎಲ್ಲಾ ಸರ್ವ ಸದಸ್ಯರಿಗೆ ಶುಭ ಹಾರೈಸಿದರು.
ಕೃಷ್ಣರಾಜಪೇಟೆ ತಾಲ್ಲೂಕು ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಜಿಎಚ್ ಗಿರೀಶ್ ಮಾತನಾಡಿ ಕುಲಿ ಕಾರ್ಮಿಕ ಸಂಘಟನೆಯನ್ನು ತಮ್ಮ ಗ್ರಾಮಗಳಲ್ಲಿ ಗ್ರಾಮ ಘಟಕವನ್ನು ಉದ್ಘಾಟಿಸುವ ಮೂಲಕ ಮಹಿಳೆಯರು ಸಂಘಟಿತರಾಗುತ್ತಿರುವುದು ಬಹಳ ಸಂತೋಷದ ವಿಷಯ ಬೇರೆಯವರ ಮಾತಂಗೆ ಕಿವಿಗೊಡದೆ ಪಂಚಾಯಿತಿಯಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಉದ್ಯೋಗ ಖಾತರಿ ಅಡಿಯಲ್ಲಿ ಎಲ್ಲಾ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುವಂತೆ ಮಾಡುವ ಮೂಲಕ ಯಂತ್ರಗಳಲ್ಲಿ ಕೆಲಸ ಮಾಡಿ ಕೂಲಿ ಕಾರ್ಮಿಕರಿಗೆ ಸಿಗುವ ಕೆಲಸವನ್ನು ಕೈಯಿಂದ ಕಿತ್ತುಕೊಳ್ಳುತ್ತಿರುವ ಜನರಿಂದ ಕೂಲಿಕಾರ್ಮಿಕರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಕೂಲಿ ಕಾರ್ಮಿಕ ಸಂಘಟನೆಗಳು ಹುಟ್ಟಿಕೊಂಡಿದೆ ರಾಜ್ಯದ್ಯಕ್ಷರು ಜಿಲ್ಲಾಧ್ಯಕ್ಷರು ಎಲ್ಲಾ ಹಿರಿಯ ಪದಾಧಿಕಾರಿಗಳ ಮಾರ್ಗದರ್ಶನದೊಂದಿಗೆ ಕುಲಿ ಕಾರ್ಮಿಕರಿಗೆ ಕುಲಿ ಸಿಗುವಂತೆ ಮಾಡಿ ಕುಲಿಕಾರ್ಮಿಕ ಕುಟುಂಬದ ಅಭಿವೃದ್ಧಿಗೆ ನಿಮ್ಮೊಂದಿಗೆ ಸಹಕರಿಸುತ್ತದೆ ಎಂದು ತಿಳಿಸುವ ಮೂಲಕ ನೂತನವಾಗಿ ಉದ್ಘಾಟನೆಗೊಂಡಿರುವ ಈ ಸಂಘದ ಎಲ್ಲ ಸರ್ವ ಸದಸ್ಯರಿಗೂ ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಪುಟ್ಟ ಮಾದು ರವರು ಗ್ರಾಮ ಘಟಕ ಉದ್ಘಾಟಿಸಿ ಉದ್ಘಾಟನಾ ನುಡಿಗಳನ್ನು ನುಡಿದರು, ಜಿಲ್ಲಾ ಕಾರ್ಯದರ್ಶಿ ಹನುಮೇಶ್, ತಾಲೂಕು ಅಧ್ಯಕ್ಷರಾದ ಜಿ ಎಚ್ ಗಿರೀಶ್, ತಾಲೂಕು ಕಾರ್ಯದರ್ಶಿ ಗೋಪಾಲ್, ರವಿ, ಅನುಸೂಯ, ಲತಾ,ಜಯಮ್ಮ,ಸ್ವಾಮಿ, ವಿನೋದ, ಪಾರ್ವತಮ್ಮ, ಗಾಯಿತ್ರಿ ಹಾಗೂ ಕೂಲಿ ಕಾರ್ಮಿಕ ಸಂಘದ ಎಲ್ಲ ಸರ್ವ ಸದಸ್ಯರುಗಳು ಗ್ರಾಮದ ಮುಖಂಡರು ಉಪಸ್ಥಿತರಿದ್ದರು,
*ವರದಿ ರಾಜು ಜಿ ಪಿ ಕಿಕ್ಕೇರಿ
*
What's Your Reaction?