*ಕಲಬುರ್ಗಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳನ್ನು ಬಂಧಿಸುವಂತೆ ಮನವಿ*

*ಕಲಬುರ್ಗಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳನ್ನು ಬಂಧಿಸುವಂತೆ  ಮನವಿ*

 ಆರ್ ಪೇಟೆ: *ವಿಶ್ವವೇ ಮೆಚ್ಚಿರುವ ತತ್ವಗಳನ್ನು ಸಾರಿರುವ ವಿಶ್ವಗುರು,ಜಗಜ್ಯೋತಿ ಬಸವೇಶ್ವರ(ಬಸವಣ್ಣ) ಭಾವಚಿತ್ರಕ್ಕೆ ಕಲ್ಬುರ್ಗಿ ಜಿಲ್ಲಾ ಕೇಂದ್ರದಲ್ಲಿ ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ಮು ಕೂಡಲೇ ಬಂಧಿಸಬೇಕೆಂದು ತಾಲ್ಲೂಕು ಕಚೇರಿಯ ಆವರಣದಲ್ಲಿ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ ಎಸ್ ಧನಂಜಯ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ದಂಡಾಧಿಕಾರಿ ನಿಸರ್ಗ ಪ್ರಿಯ ಅವರಿಗೆ ಮನವಿ ಪತ್ರ ನೀಡಿದರು.*

ಬಳಿಕ ಮಾತನಾಡಿದ ಅ.ಭಾ.ವೀ.ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಾಗೂ ವಕೀಲರಾದ ವಿ ಎಸ್ ಧನಂಜಯ್ ಕುಮಾರ್ ಮಾತನಾಡಿ ನಮ್ಮ ಸಮುದಾಯ ಅಷ್ಟೇ ಅಲ್ಲದೆ ಇತರೆ ಸಮುದಾಯಗಳು ಬಸವೇಶ್ವರ ಅವರನ್ನು ಪೂಜಿಸುತ್ತಾರೆ. ಗೌರವಿಸುತ್ತಾರೆ. ಆರಾಧಿಸುತ್ತಾರೆ. ನಮ್ಮ ಸಮುದಾಯದ ದೇವರಾದ ಬಸವಣ್ಣ ಅವರ ಭಾವಚಿತ್ರಕ್ಕೆ ಕಲ್ಬುರ್ಗಿ ಪಟ್ಟಣದಲ್ಲಿ ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನು ಘಟನೆ ನಡೆದು ನಾಲ್ಕೈದು ದಿನಗಳಾದರೂ ಆರೋಪಿಗಳನ್ನು ಕಲ್ಬುರ್ಗಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲದಿರುವುದು ನೋವಿನ ಸಂಗತಿ.ಬುದ್ಧ, ಬಸವ,ಅಂಬೇಡ್ಕರ್ ಸಮಾಜಗಳ ದಾರ್ಶನಿಕರಾಗಿದ್ದು ಬಸವೇಶ್ವರ ಭಾವಚಿತ್ರಕ್ಕೆ ಬೆಂಕಿ‌ ಹಚ್ಚಿರುವುದು ನಾಚಿಕೆ ಗೇಡಿನ ವಿಷಯ ಹಾಗೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾಡಿರುವ ಅಪಮಾನವಾಗಿದೆ.ಇದನ್ನು ನಮ್ಮ ತಾಲ್ಲೂಕು ಘಟಕವು ತೀವ್ರವಾಗಿ ಖಂಡಿಸುತ್ತದೆ.ಆದ್ದರಿಂದ ಆದಷ್ಟು ಬೇಗ ಕಲ್ಬುರ್ಗಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಶೀಘ್ರವಾಗಿ ಹೇಯ ಕೃತ್ಯ ಮಾಡಿರುವ ಸಮಾಜ ಘಾತುಕರನ್ನು ಪತ್ತೆ ಮಾಡಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಕೋರುತ್ತೇವೆ.ತಾವುಗಳು ಈ ವಿಚಾರವನ್ನು ಕಲ್ಬುರ್ಗಿ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಕಳುಹಿಸಕೊಡಬೇಕೆಂದು ತಹಶಿಲ್ದಾರ್ ರಲ್ಲಿ ಮನವಿ ಮಾಡಿದರು.ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಆರೋಪಿಗಳಿಗೆ ತಕ್ಕ ಶಿಕ್ಷೆಗೆ ಒಳಪಡಿಸಬೇಕೆಂದು ಸುದ್ದಿಗಾರರೊಂದಿಗೆ ತಿಳಿಸಿದರು.

ತಹಶಿಲ್ದಾರ್ ನಿಸರ್ಗ ಪ್ರಿಯ ಮಾತನಾಡಿ ಆದಷ್ಟು ಬೇಗ ಕಲ್ಬುರ್ಗಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ನೀವು ನೀಡಿರುವ ಮನವಿ ಪತ್ರವನ್ನು ಕಳಿಸಿಕೊಡುತ್ತೇನೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅ.ಭಾ.ವೀ.ಲಿಂ.ಮಹಾಸಭಾದ ಉಪಾಧ್ಯಕ್ಷ ಎಂ ಪಿ ಪ್ರಕಾಶ್, ಜಯನಂದಿನಿ,ನಂಜುಂಡಪ್ಪ,

ಪ್ರಧಾನ ಕಾರ್ಯದರ್ಶಿ ಈರಪ್ಪ,ಕಾರ್ಯದರ್ಶಿ ಮಹದೇವ, ಮೀನಾಕ್ಷಿ, ರಾಣಿ ಜಗದೀಶ್, ಕೋಶಾಧ್ಯಕ್ಷ ಮಹೇಶಕುಮಾರ್,ನಿರ್ದೇಶಕರಾದ ರಾಜಪ್ಪ,ಎಲ್ ಪಿ ವಸಂತಪ್ಪ,ಶಿವಶಂಕರ್, ವಿಜಯಕುಮಾರ್, ಮೋಹನಮೂರ್ತಿ,ಡಿ ಸಿ ಕುಮಾರ್, ಶಿವಮೂರ್ತಿ, ಅಪ್ಪಾಜಿ,ಎ‌ಎಂ ರಾಜು,ಮಹದೇವಮ್ಮ,ಈರಾಜಮ್ಮ,ಜ್ಯೋತಿ, ಪುಷ್ಪಾರಮೇಶ್,ಸೌಮ್ಯ ಲಿಂಗರಾಜು,ಕೇಬಲ್ ಗುಂಡ,ವಿರೂಪಾಕ್ಷ, ಬಸವನಹಳ್ಳಿ ಮಹೇಶ್, ಪುರ ದಿಲೀಪ್ ಕುಮಾರ್, ಬೂಕಹಳ್ಳಿ ಶಿವಕುಮಾರ್, ಮಾಕವಳ್ಳಿ ನಾಗೇಶ್, ಎಲ್ ಐ ಸಿ ಶಿವಪ್ಪ, ಹರೀಶ್, ತಮ್ಮಣ್ಣ, ಚೌಡಸಮುದ್ರ ರುದ್ರಪ್ಪ,ರಾಜಣ್ಣ,ಮೋದೂರು ವೀರಭದ್ರಪ್ಪ,ಅಂಚನಹಳ್ಳಿ ಸದಾಶಿವಪ್ಪ,ಯಲಾದಹಳ್ಳಿ ಸಿದ್ದಲಿಂಗಪ್ಪ,ಯತೀಶ್,

ಯಗಚಕುಪ್ಪೆ ಚಂದ್ರಶೇಖರಪ್ಪ,ರವಿ,ಮಂಜು, ಕಟ್ಟಹಳ್ಳಿ ಪ್ರಕಾಶ್, ನಾಗರಾಜಪ್ಪ,ಬೂವನಹಳ್ಳಿ ಪುಟ್ಟಪ್ಪ, ಬಸವರಾಜು, ಜಗದೀಶ್, ಪರಮೇಶ್, ವಡ್ಡರಹಳ್ಳಿ ಚನ್ನಬಸಪ್ಪ, ಕುಮಾರ್ ನಿಂಗರಾಜು,ನಾಗರಾಜು, ಸಣ್ಣಸ್ವಾಮಿ,ಸೋಮನಾಥಪುರ ಸುರೇಶ್, ನಾಡಭೋಗನಹಳ್ಳಿ ಈರಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ವರದಿ,ರಾಜು ಜಿಪಿ ಕಿಕ್ಕೇರಿ

What's Your Reaction?

like

dislike

love

funny

angry

sad

wow