*ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೆಳಗಿನ ಹಾದಿಯಲ್ಲಿ ನಡೆಯುತ್ತಿದ್ದೇವೆ ನಾವೆಲ್ಲ ಸಾರಂಗಿ ನಾಗಣ್ಣ*

*ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೆಳಗಿನ ಹಾದಿಯಲ್ಲಿ ನಡೆಯುತ್ತಿದ್ದೇವೆ ನಾವೆಲ್ಲ ಸಾರಂಗಿ ನಾಗಣ್ಣ*

ಕೆ ಆರ್ ಪೇಟೆ.ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಮಾಜಿ ಸಚಿವರಾದ ಕೆ ಸಿ ನಾರಾಯಣಗೌಡ ರವರ ನಿವಾಸದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕೃಷ್ಣರಾಜಪೇಟೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ಸಾರಂಗಿ ನಾಗಣ್ಣ ಎಲ್ಲಾ ವರ್ಗದ ಜನರಿಗೂ ನ್ಯಾಯ ಕೊಡಿಸುವ ಮೂಲಕ ಬೆಳಕಾಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆದರೆ ಅವರ ಕನಸು ಮಾಡಲು ಅವರು ತೋರಿದ ದಾರಿಯಲ್ಲಿ ನಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.

 ಮಂಡ್ಯ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಹಾಗೂ ಕೆ ಆರ್ ಪೇಟೆ ತಾಲೂಕು ಉಸ್ತುವಾರಿಗಳಾದ ಕೃಷ್ಣಪ್ಪ ರವರು ಮಾತನಾಡಿ ಇಂಥ ಮಹಾನಾಯಕರ ಆದರ್ಶ ತತ್ವ ಸಿದ್ಧಾಂತ ಶೋಷಿತ ವರ್ಗಗಳನ್ನು ಮೇಲೆತ್ತಲು ಅವರ ಹೋರಾಟ ಕರಡು ಸಮಿತಿಯಲ್ಲಿ ಹಗಲು ರಾತ್ರಿ ಎನ್ನದೆ ಸಂವಿಧಾನ ರಚಿಸಲು ಅವರ ಪರಿಶ್ರಮ ಈ ದಿನ ನಮಗೆ ಅವೆಲ್ಲವೂ ರಕ್ಷಣಾತ್ಮಕವಾದ ನ್ಯಾಯ ದೊರಕಿದೆ ಆದ್ದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಲ್ಲ ವರ್ಗ ಜನರ ಪಾಲಿನ ದೇವರಾಗಿದ್ದಾರೆ ಅಂಬೇಡ್ಕರ್ ಕೇವಲ ಭಾರತೀಯ ಸಮಾಜದ

ಬಗ್ಗೆ ಮಾತ್ರ ಅಧ್ಯಯನ ಮಾಡಲಿಲ್ಲ. ಇಲ್ಲಿನ

ವೇದಾಧ್ಯಯನ, ಮನುಸ್ಮೃತಿಗಳು ಮಾತ್ರ ಓದಿನ

ವಿಷಯಗಳಾಗಿರಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಗಳನ್ನು

ಅವರದೇ ನೆಲದಲ್ಲಿ ಓದಿ ಡಾಕ್ಟರೇಟ್ ಮೀರಿದ

ಅಧ್ಯಯನ ಮಾಡಿದರು. ನಮ್ಮ ಸಂಸ್ಕೃತಿಗೆ

ಭಿನ್ನ ಸಂಸ್ಕೃತಿಯ ಅಧ್ಯಯನ ಅವರಲ್ಲಿ

ಉಂಟುಮಾಡಿರುವ ಮಾನಸಿಕ ಘರ್ಷಣೆಯನ್ನು

ಊಹಿಸುವುದು ಕಷ್ಟ.

 ಓದು ಅಧ್ಯಯನ ಮಾತ್ರವಲ್ಲದೆ ವಿಶಾಲ ಅರಿವಿನ

ಮನಸ್ಥಿತಿ ಮತ್ತು ಅದನ್ನು ಪ್ರಕಟಿಸಲು ಸಾರ್ವಜನಿಕ

ಜೀವನದ ಪ್ರವೇಶವೂ ಅವರ ಬದುಕಿನಲ್ಲಾದ

ಮಹತ್ವದ ಘಟನೆ. ಏಕೆಂದರೆ ಒಬ್ಬ ಪ್ರತಿಭಾವಂತ

ವ್ಯಕ್ತಿ ಆ ಪ್ರತಿಭೆಯನ್ನು ತನ್ನ ಔನತ್ಯಕ್ಕೆ ಮಾತ್ರ

ಬಳಸುವ ಸಾಧ್ಯತೆಯೇ ಹೆಚ್ಚು. ಸಾರ್ವಜನಿಕ ಜೀವನ

ಸ್ವಲ್ಪ ತಲೆನೋವಿನ ಕೆಲಸ. ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ರಾಜ್ಯ ಎಸ್ ಟಿ ಮೋರ್ಚಾದ ಸದಸ್ಯರಾದ ಮಹೇಶ್ ನಾಯಕ, ತಾಲೂಕು ಬಿಜೆಪಿ ನಿಕಟ ಪೂರ್ವ ಅಧ್ಯಕ್ಷರಾದ ಪರಮೇಶ್ ಅರವಿಂದ, ಬಿಜೆಪಿ ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಚೊಕನಹಳ್ಳಿ ಪ್ರಕಾಶ್, ಸಿಂಗನಹಳ್ಳಿ ರವಿ, ಮಹಿಳಾ ಉಪಾಧ್ಯಕ್ಷ ಪುಷ್ಪ ರಮೇಶ್, ಎಸ್ ಸಿ ಮೋರ್ಚದ ಅಧ್ಯಕ್ಷರಾದ ಯಾಲಕಯ್ಯ, ಒಬಿಸಿ ಮೋರ್ಚಾದ ಅಧ್ಯಕ್ಷರಾದ ಮಂಜು, ಪರಮೇಶ್, ರಮೇಶ್, ಬಿಜೆಪಿ ಪಕ್ಷದ ಎಲ್ಲಾ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.

 *ವರದಿ,ರಾಜು ಜಿ ಪಿ ಜಿ ಕಿಕ್ಕೇರಿ ಆರ್ ಪೇಟೆ*

What's Your Reaction?

like

dislike

love

funny

angry

sad

wow