ಹಿಂದುಳಿದ ವರ್ಗಗಳಿಗೆ ಸೇರಿರುವ ಪತ್ರಕರ್ತರು ಸಂಘಟಿತರಾಗಿ ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟ ಮಾಡಿ, ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಧನೆ ಮಾಡಬೇಕು, ಇಂದು ನಿಷ್ಠಾವಂತ ಪತ್ರಕರ್ತರಿಗಿಂತ ನಕಲಿ ಪತ್ರಕರ್ತರ ಸಂಖ್ಯೆಯೇ ಹೆಚ್ಚಾಗಿದೆ, ಹಿಂದುಳಿದ ವರ್ಗಗಳಿಗೆ ಸೇರಿರುವ ಪತ್ರಕರ್ತರು ಜೈ ಭೀಮ್ ಎಂದು ಘೋಷಣೆ ಕೂಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಗಂಗಾಧರ್ ಮೊದಲಿಯಾರ್

ಹಿಂದುಳಿದ ವರ್ಗಗಳಿಗೆ ಸೇರಿರುವ ಪತ್ರಕರ್ತರು ಸಂಘಟಿತರಾಗಿ ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟ ಮಾಡಿ, ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಧನೆ ಮಾಡಬೇಕು, ಇಂದು ನಿಷ್ಠಾವಂತ ಪತ್ರಕರ್ತರಿಗಿಂತ ನಕಲಿ ಪತ್ರಕರ್ತರ ಸಂಖ್ಯೆಯೇ ಹೆಚ್ಚಾಗಿದೆ, ಹಿಂದುಳಿದ ವರ್ಗಗಳಿಗೆ ಸೇರಿರುವ ಪತ್ರಕರ್ತರು ಜೈ ಭೀಮ್ ಎಂದು ಘೋಷಣೆ ಕೂಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಗಂಗಾಧರ್ ಮೊದಲಿಯಾರ್

ನಾಗರಿಕ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮಗಳ ವಿರುದ್ದ ತಮ್ಮ ಲೇಖನಿಯ ಮೂಲಕ ಎಚ್ಚರಿಸಿ ಹಿಂದುಳಿದ ವರ್ಗಗಳ ಜನರು ಹಾಗೂ ಶೋಷಿತರಿಗೆ ಶಕ್ತಿ ತುಂಬುವ ಕೆಲಸವನ್ನು ಹಿಂದುಳಿದ ವರ್ಗಗಳ ಪತ್ರಕರ್ತರು ಬದ್ಧತೆಯಿಂದ ಮಾಡಬೇಕು ಎಂದು ಟಿಎಸ್ಸಾರ್ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಕರೆ ನೀಡಿದರು.

ಅವರು ಬೆಂಗಳೂರಿನ ಗಾಂಧೀ ನಗರದಲ್ಲಿರುವ ಕುರುಬರ ಸಂಘದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ, ವರದಿಗಾರರ ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ದ ಗಂಧರ್ವಸೇನಾ ಮತ್ತು ಕಾರ್ಯದರ್ಶಿ ವಿರೂಪಾಕ್ಷ ಹಾಗೂ ರಾಜ್ಯ ಸರ್ಕಾರದಿಂದ ಪತ್ರಕರ್ತರ ಮಾನ್ಯತಾ ಸಮಿತಿಯ ಸದಸ್ಯರಾಗಿ ನೇಮಕವಾಗಿರುವ ಮಂಡ್ಯದ ಶಶಿಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಹಿಂದುಳಿದ ವರ್ಗಗಳಿಗೆ ಸೇರಿರುವ ಹೆಚ್ಚಿನ ಪತ್ರಕರ್ತರು ನಾಡಿನ ಎಲ್ಲಾ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ನಾವು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಹೇಳಿಕೊಳ್ಳಲು ಧೈರ್ಯದಿಂದ ಮುಂದೆ ಬರುತ್ತಿಲ್ಲ, ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿಂದುಳಿದ ವರ್ಗಗಳಿಗೆ ಸೇರಿದ ಪತ್ರಕರ್ತರ ಮೇಲೆ ನಿರಂತರವಾಗಿ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತಿದ್ದರೂ ಯಾರೂ ಪ್ರಶ್ನೆ ಮಾಡುವ ಎದೆಗಾರಿಕೆ ತೋರಿಸುತ್ತಲ್ಲ, ಹಿಂದುಳಿದ ಪತ್ರಕರ್ತರಿಗೆ ಸಂವಿಧಾನ ಬದ್ದವಾಗಿ ದೊರೆಯಬೇಕಾದ ಎಲ್ಲಾ ಬಗೆಯ ಸೌಲಭ್ಯಗಳು ಸಿಗಲೇಬೇಕು, ಈ ನಿಟ್ಟಿನಲ್ಲಿ ಸಂಘದ ಅಡಿಯಲ್ಲಿ ಹೋರಾಟ ಮಾಡಲು ನಾವು ಹಿಂಜರಿಕೆಯನ್ನು ಬದಿಗಿಟ್ಟು ಸದಾ ಸಿದ್ದರಾಗಿರದಿದ್ದರೆ ನಮಗೆ ಶೋಷಣೆ ತಪ್ಪಿದ್ದಲ್ಲ ಆದ್ದರಿಂದ ಪತ್ರಿಕಾ ಮಿತ್ರರು ಸಂಘದಲ್ಲಿ ಒಡಕು ಉಂಟುಮಾಡದೆ ಒಂದಾಗಿ ಹೋರಾಟ ಮಾಡಬೇಕು. ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಕೇಳಿ ಪಡೆದು ಕೊಂಡು ಸಾಧನೆ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಗಂಗಾಧರ್ ಮೊದಲಿಯಾರ್ ಹೇಳಿದರು.

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರಾದ ಹೆಚ್. ಕಾಂತರಾಜು ಮಾತನಾಡಿ ರಾಜ್ಯ ಮಾಧ್ಯಮ ಅಕಾಡೆಮಿಯಲ್ಲಿ ಹಿಂದುಳಿದ ವರ್ಗಗಳ ಸಂಘಕ್ಕೆ ನೀಡಬೇಕಾದ ಸದಸ್ಯ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ. ನಾವು ಹಿಂದುಳಿದ ವರ್ಗಗಳಿಗೆ ಸೇರಿರುವ ಪತ್ರಕರ್ತರಾದರೂ ಸಮಾಜದ ಕಣ್ಣನ್ನು ತೆರೆಸುವ ಪ್ರಾಮಾಣಿಕ ವರದಿಯನ್ನು ಮಾಡುವ ನೈತಿಕತೆ ಹಾಗೂ ಬದ್ಧತೆಯು ನಮ್ಮ ವರದಿಗಾರರಿಗೆ ಇದೆ ಎನ್ನುವುದು ಬಹಿರಂಗ ಸತ್ಯವಾಗಿದ್ದರೂ ನಮ್ಮ ಮೇಲಿನ ಶೋಷಣೆ ಇಂದಿಗೂ ತಪ್ಪಿಲ್ಲ, ಹಿಂದುಳಿದ ವರ್ಗಗಳ ಪತ್ರಕರ್ತರು ತಮ್ಮ ಬ್ರಾಹ್ಮಣಿಕೆಯ ಜಾಣ್ಮೆಯನ್ನು ಹೋರಾಟಕ್ಕೆ ಬಳಸಿಕೊಂಡು ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಹಿಂದುಳಿದ ವರ್ಗಗಳ ಪತ್ರಕರ್ತರ ಸಂಘ ಆರಂಭವಾಗಿದೆ, ನಮಗೆ ಸಾಮಾಜಿಕ ನ್ಯಾಯ ಸಿಗದಿದ್ದರೆ ಜೈ ಭೀಮ್ ಎಂದು ಹೋರಾಟದ ಕಹಳೆಯನ್ನು ಮೊಳಗಿಸುವುದು ಅನಿವಾರ್ಯ ವಾಗಲಿದೆ ಎಂದು ಕಾಂತರಾಜು ಹೇಳಿದರು.

ರಾಜ್ಯ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸಿದ್ಧರಾಜು, ಹಿರಿಯ ಪತ್ರಕರ್ತರಾದ ಲಕ್ಷ್ಮಣ ಕೊಡಸೆ, ವೆಂಕಟ್ ಸಿಂಗ್, ಡಾ. ಎಂ.ಎಸ್.ಮಣಿ, ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಶಶಿಕುಮಾರ್, ಸಂಘದ ನಿರ್ಗಮಿತ ಅಧ್ಯಕ್ಷ ಡಾ.ಕೆ. ಆರ್.ನೀಲಕಂಠ ಸಭೆಯಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ, ವರದಿಗಾರರ ಸಂಘದ ನೂತನ ಅಧ್ಯಕ್ಷರಾಗಿ ಗಂಧರ್ವಸೇನಾ, ಪ್ರಧಾನ ಕಾರ್ಯದರ್ಶಿಯಾಗಿ ವಿರೂಪಾಕ್ಷ ಅಧಿಕಾರ ಸ್ವೀಕರಿಸಿದರು. 

ಹಿರಿಯ ಪತ್ರಕರ್ತ ನೇಕಾರ ವಾಣಿ ಪತ್ರಿಕೆ ಸಂಪಾದಕ ನೊಣವಿನಕೆರೆ ಲಿಂಗರಾಜು ಸ್ವಾಗತಿಸಿದರು, ಅಭಿಮನ್ಯು ಪತ್ರಿಕೆ ಸಂಪಾದಕ ಬಿ.ಎನ್. ರಮೇಶ್ ವಂದಿಸಿದರು, ಕಾಡುಮೆಣಸ ಚಂದ್ರು ಕಾರ್ಯಕ್ರಮ ನಿರೂಪಿಸಿದರು. ನಾಗಮಂಗಲ ವೆಂಕಟೇಶ್ ಪ್ರಾರ್ಥಿಸಿದರು. 

ಪತ್ರಕರ್ತರಾದ ಪೂರ್ಣಿಮಾ ಸಿಂಗ್, ಶಿವರಾಜ್ ಮೌರ್ಯ, ನೊಣವಿನಕೆರೆ ಲಿಂಗರಾಜು ಹಾಗೂ ರಾಜು ಕುಂಬಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

 

What's Your Reaction?

like

dislike

love

funny

angry

sad

wow