ಕೃಷ್ಣರಾಜಪೇಟೆ ಬಂದ್ ಗೆ ಕರೆ ನೀಡಿದ ಕರ್ನಾಟಕ ಭೀಮ್ ಸೇನೆ (ನೋ),_*
*_ಕಾವೇರಿ ಜಲ ವಿವಾದ, ತಮಿಳುನಾಡಿಗೆ ನೀರು ಹರಿಸುವಂತೆ ನ್ಯಾಯಾಧೀಕರಣದ ತೀರ್ಪನ್ನು ವಿರೋಧಿಸಿ ಸೆಪ್ಟೆಂಬರ್ 26ರಂದು ಕೃಷ್ಣರಾಜಪೇಟೆ ಬಂದ್ ಗೆ ಕರೆ ನೀಡಿದ ಕರ್ನಾಟಕ ಭೀಮ್ ಸೇನೆ (ನೋ),_*
_ಕಾವೇರಿ ನ್ಯಾಯಧೀಕರಣದ ಮಧ್ಯಂತರ ತೀರ್ಪನ್ನು ವಿರೋಧಿಸಿ ಸೆಪ್ಟಂಬರ್ 26ರಂದು ಕರ್ನಾಟಕ ಭೀಮ್ ಸೇನೆ (ನೋ) ಕೃಷ್ಣರಾಜಪೇಟೆ ತಾಲ್ಲೂಕು ಘಟಕ ವತಿಯಿಂದ ಕೃಷ್ಣರಾಜಪೇಟೆ ಬಂದ್ ಕರೆ ನೀಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಗಣೇಶ್ ಹೇಳಿದರು,_
_ಮೈಸೂರು ಭಾಗದ ರೈತರಿಗೆ ಮರಣ ಶಾಸನ ವಾಗಿರುವ ಕಾವೇರಿ ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ರೈತ ವಿರೋಧಿಯಾಗಿದೆ. ಕನ್ನಂಬಾಡಿ ಕಟ್ಟೆಯಲ್ಲಿ ನೀರಿಲ್ಲದೆ ಖಾಲಿಯಾಗಿದ್ದು, ಕುಡಿಯುವ ನೀರು ಸೇರಿದಂತೆ ಜನಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ಆದ್ದರಿಂದ ಕಬಿನಿ ಮತ್ತು ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ರೈತರ ಹಿತ ಕಾಪಾಡಲು ಮುಂದಾಗಬೇಕು. ರೈತರ ಆಕ್ರೋಶಕ್ಕೆ ಗುರಿಯಾದರೆ ಯಾವ ಸರ್ಕಾರವು ದೃಢವಾಗಿ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂಬ ನೈಜ ಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ರೈತರ ಹಿತ ಕಾಪಾಡಲು ತಮಿಳುನಾಡು ಯಾವಾಗ ರಾಜ್ಯ ಸರ್ಕಾರವು ಮುಂದಾಗಬೇಕು ಎಂದು ತಾಲೂಕು ಅಧ್ಯಕ್ಷ ಗಣೇಶ್ ಆಗ್ರಹಿಸಿದರು._
_ಸೆಪ್ಟೆಂಬರ್ 26ರಂದು ಕೃಷ್ಣರಾಜಪೇಟೆ ಸಂಪೂರ್ಣ ಬಂದ್ ಆಗಲಿದ್ದು, ದೈನಂದಿನ ಎಲ್ಲಾ ವ್ಯವಹಾರಗಳು ಸ್ಥಗಿತವಾಗಲಿದೆ, ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಲಿದ್ದು, ಆಟೋ ಸೇರಿದಂತೆ ಎಲ್ಲಾ ಬಗೆಯ ವಾಹನಗಳು ಓಡಾಟವನ್ನು ನಿಲ್ಲಿಸಲಿವೆ. ತುರ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಯಾವುದೇ ವ್ಯವಹಾರಗಳು ಕೃಷ್ಣರಾಜಪೇಟೆಯಲ್ಲಿ ನಡೆಯುವುದಿಲ್ಲ ಆದ್ದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯುವಜನರು ತರಗತಿಗಳನ್ನು ಬಹಿಷ್ಕರಿಸಿ ಕೃಷ್ಣರಾಜಪೇಟೆ ಬಂದ್ ನಲ್ಲಿ ಭಾಗವಹಿಸಿ ಬಂದ್ ಯಶಸ್ವಿಗೊಳಿಸಿಕೊಡಬೇಕು ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್. ಎನ್.ಕೆ. ರವರು ಮನವಿ ಮಾಡಿದರು._
*_ಗಣೇಶ್_*
*_ತಾ!! ಅಧ್ಯಕ್ಷರು_*
*_ಸಾಯಿಕುಮಾರ್.ಎನ್.ಕೆ._*
_ತಾ! ಪ್ರಧಾನ ಕಾರ್ಯದರ್ಶಿಗಳು,_
What's Your Reaction?