ಆರ್.ಪೇಟೆ:ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡು ವುದರಿಂದ ಗ್ರಾಮದ ಹಿತ ಕಾಪಾಡುವುದರ ಜೊತೆಗೆ ಯುವ ಜನತೆಯ ಆರೋಗ್ಯವನ್ನೂ ವೃದ್ಧಿಸಿಕೊಳ್ಳ ಬಹುದು ಎಂದು ಕಾಂಗ್ರೆಸ್ ಮುಖಂಡ ಡಾ:ಕೆ.ಸಿ ಶ್ರೀಕಾಂತ್ ಅಭಿಪ್ರಾಯಪಟ್ಟರು.

ಆರ್.ಪೇಟೆ:ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡು ವುದರಿಂದ ಗ್ರಾಮದ ಹಿತ ಕಾಪಾಡುವುದರ ಜೊತೆಗೆ ಯುವ ಜನತೆಯ ಆರೋಗ್ಯವನ್ನೂ ವೃದ್ಧಿಸಿಕೊಳ್ಳ ಬಹುದು ಎಂದು ಕಾಂಗ್ರೆಸ್ ಮುಖಂಡ ಡಾ:ಕೆ.ಸಿ ಶ್ರೀಕಾಂತ್ ಅಭಿಪ್ರಾಯಪಟ್ಟರು.

ವೆಂಕಟರಮಣಸ್ವಾಮಿ ರಥೋತ್ಸವ ಪ್ರಯುಕ್ತ ಬಂಡಿಹೊಳೆ ಗ್ರಾಮದ ಯುವರ ಬಳಗ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ತಂಡಗಳ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟಿಸಿ ಮಾತನಾಡಿದರು.ಕ್ರೀಡೆಯಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕತೆ ವೃದ್ಧಿಯಾಗು ತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಯುವಕರು ನಾಯಕತ್ವವನ್ನು ಬೆಳೆಸಿ ಕೊಳ್ಳಬಹುದು. ಇದರಿಂದ ಸಂಘಟನೆ ರೂಪುಗೊಳ್ಳಲು ನೆರವಾಗತ್ತದೆ.ಮೊಬೈಲ್, ಟಿವಿಯಿಂದ ಇಂದಿನ ಗ್ರಾಮೀಣ ಭಾಗದ ಯುವಕರು ಕ್ರೀಡೆ ಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದು ಡಾ:ಶ್ರೀಕಾಂತ್ ಅಭಿಪ್ರಾಯಪಟ್ಟರು.

ಬಳಿಕ ಮಾತನಾಡಿದ ಕ್ರೀಡಾಪಟು ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಪ್ರಮೀಳಾ ಕ್ರೀಡೆ ದೇಹದ ರಕ್ಷಣೆಗೆ ಮಾರ್ಗಸೂಚಿ ನೀಡುತ್ತದೆ. ಉತ್ತಮ ಆಹಾರದ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ ಇಂದು ಕ್ರೀಡೆ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದೆ. ದೈಹಿಕ ಕಸರತ್ತು, ಬುದ್ದಿಶಕ್ತಿಯನ್ನು ಹೆಚ್ಚಿಸ ಬಲ್ಲ ಅನೇಕ ಗ್ರಾಮೀಣ ಆಟಗಳು ಮರೆಯಾಗುತ್ತಿವೆ.ಅನೇಕ ಹಳ್ಳಿಗಾಡಿನ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ. ಸಿಕ್ಕರೂ ಸರಿಯಾದ ಪ್ರಚಾರ,ಮಾರ್ಗದರ್ಶನದ ಕೊರತೆಯಿಂದ ಅಂಥ ಪ್ರತಿಭೆಗಳು ಹಳ್ಳಿಗಳಲ್ಲಿಯೇ ಕಮರಿ ಹೋಗುತ್ತಿವೆ. ಇದನ್ನು ತಪ್ಪಿಸಲು ಗ್ರಾಮೀಣ ಭಾಗದಲ್ಲಿ ಕ್ರೀಡಾ ಕೂಟಗಳು ನಡೆಯುವಂತಾಗಬೇಕು. ಆಗ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಗ್ರಾಮದ ಹಿರಿಯ ಮುಖಂಡ ರಾಜಶೇಖರ್, ದೇವರಸೆಗೌಡ, ಪುರುಷೋತ್ತಮ್,ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್, ಕಾಯಿ ಮಂಜೇಗೌಡ,ಆರ್ ಟಿ ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗಂಜಿಗೆರೆ ಮಹೇಶ್,ಬಂಡಿಹೊಳೆ ಯುವ ಮುಖಂಡ ಸಚಿನ್ ರಘು ಋತ್ವಿಕ್, ಪ್ರದೀಪ್, ಸುನಿಲ್,ಸೇರಿದಂತೆ ಇತರರಿದ್ದರು.

*ವರದಿ, ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow